Thursday, April 28, 2022

ಶ್ರೀರಂಗ ವಚನಾಮೃತ (Sriranga Vachanamruta)

ಸ್ವರೂಪ ನೋಡಿಕೊಂಡು ಮಾತನಾಡಿ ಎನ್ನುವುದುಂಟು. ಸ್ವರೂಪವೆಂದರೇನು? ಸ್ವರೂಪ ಎಂದರೆ ಕೇವಲ ಹೊರಗಿನಿಂದ ಅಳೆದರೆ ತೋರುವ ಬಾಲ್ಯದಲ್ಲಿ ಒಂದು ಸ್ವರೂಪ, ಯೌವನದಲ್ಲಿ ಒಂದು ಸ್ವರೂಪ, ವಾರ್ಧಕ್ಯದಲ್ಲಿ ಮತ್ತೊಂದು, ಹೀಗೆ ಮನುಷ್ಯನ ಸ್ವರೂಪ ಬದಲಾಗುತ್ತಲೇ ಇರುತ್ತದೆಯಲ್ಲಾ- ಅದಲ್ಲ. ಅದಕ್ಕೆ Standard (ಮಾನ) ಇರುವುದಿಲ್ಲ. ಆದ್ದರಿಂದ ವಿಕಾರಕ್ಕೆಡೆಯಾದ ಜಾಗದಿಂದ ಸ್ವರೂಪವನ್ನಳೆಯಲಾಗುವುದಿಲ್ಲ. ವಿಕಾರವಿಲ್ಲದ ಜಾಗದಿಂದ ಅರಿಯಬೇಕಾದ ವಿಷಯವಿದು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, April 26, 2022

ಶ್ರೀರಂಗ ವಚನಾಮೃತ (Sriranga Vachanamruta)

Census (ಪ್ರಜಾಗಣನೆ) ಪುಸ್ತಕದಲ್ಲಿ ನಮ್ಮ ಹೆಸರು ಇಲ್ಲದಿದ್ದರೆ ನಾವಿಲ್ಲವೇ ಎಂದು ಸಂದೇಹ ಪಡಬಾರದು. ಸೃಷ್ಟಿ ಹೇಳುತ್ತಾ ಇದೆ. ಇಂದು, ಮುಂದೆ, ಎಂದೆಂದಿಗೂ ಯಾರು ಹೇಳಲಿ, ಯಾರು ಒಪ್ಪಿಕೊಳ್ಳಲಿ, ಬಿಡಲಿ, ವಿಷಯದ ಸ್ವರೂಪವೇನು? ಎಂದು ನೋಡಬೇಕು

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, April 24, 2022

Sriranga Mahaguru - Nectarine Nuggets

The greatness of the match-stick is because of the phosphorous it possesses; it does not lie in the empty sticks. Similarly Guru refers not to the person but to the power in him. To make this power manifest, certain unification has to take place and that is the union of Guru, disciple and the Lord.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, April 21, 2022

ಶ್ರೀರಂಗ ವಚನಾಮೃತ (Sriranga Vachanamruta)

ಒಂದು ವೃಕ್ಷವು ಬೀಜದ ಆಶಯವನ್ನು ಕ್ರಮಬದ್ಧವಾಗಿ ವಿಸ್ತರಿಸಿ ಬೀಜರೂಪದಲ್ಲೇ ನಿಲ್ಲುವಂತೆ ಬೆಳೆದಾಗ ಅದರ ಸ್ವರೂಪವನ್ನುಳಿಸಿಕೊಂಡು ಬೆಳೆದಂತಾಗುತ್ತದೆ. ಹೀಗಲ್ಲದೆ ಎಲೆಯಲ್ಲಿಯೋ, ಕಾಯಲ್ಲಿಯೋ ವಿಕಾಸ ನಿಂತರೆ ಮತ್ತೆ ಬೀಜದ ರೂಪವು ಉಳಿಯುವುದಿಲ್ಲ. ಹಾಗೆಯೇ ಸ್ವರೂಪ ಉಳಿಸಿಕೊಂಡು ಜೀವನ ಮಾಡಬೇಕೆಂದರೆ ಹುಟ್ಟು ಸಾವುಗಳಿಲ್ಲದೆ ಪರಮಾನಂದದಲ್ಲಿದ್ದು, ಜ್ಞಾನ, ಆನಂದ, ಅಣುತ್ವ, ಅಮಲತೆ ಇವುಗಳು ಉಳಿಯುವಂತೆ ಜೀವನ ಮಾಡಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, April 19, 2022

ಶ್ರೀರಂಗ ವಚನಾಮೃತ (Sriranga Vachanamruta)

ಸ್ವರೂಪ ಅರಿತರೆ ನಮ್ಮ ಬಾಳಾಟ, ಅರಿಯದಿದ್ದರೆ ಗೋಳಾಟ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, April 17, 2022

Sriranga Mahaguru - Nectarine Nuggets

A medium like a wire is essential for the flow of current. Similarly, a Guru endowed with Kalyāṇa Guṇas (auspicious qualities) of the Supreme Lord and who has descended as a Mahā Puruṣa (noble personality) is indispensable for every individual for the flow of spiritual energy from the Lord.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, April 14, 2022

ಶ್ರೀರಂಗ ವಚನಾಮೃತ (Sriranga Vachanamruta)

ನಿತ್ಯನಾದ ಆತ್ಮನಿರುವನು. ಅವನಿಗೆ ಕರ್ಮವಿಶೇಷದಿಂದ ಬೇರೆಬೇರೆ ರೂಪಗಳು ಬರುವುವು. ಅವನು ಅಷ್ಟಪಾಶಗಳಿಗೆ ಸಿಕ್ಕಿಕೊಳ್ಳುವನು. ಸತ್ಕರ್ಮಗಳನ್ನಾಚರಿಸಿದಲ್ಲಿ ಪುಣ್ಯಗತಿಯುಂಟು. ಇಂದ್ರಿಯಸಂಯಮ ಮಾಡಿ ಆತ್ಮನು ಸರಿಯಾದ ದಾರಿಯಲ್ಲಿ ಹೋಗುವಂತೆ ಮಾಡಿದರೆ ಅವನಿಗೆ ಅಷ್ಟಪಾಶಗಳು ಕಳೆದು ಅವನು ತನ್ನ ಸ್ವರೂಪ ಪಡೆಯುವನು. ಇದು ಎಲ್ಲಾ ಜೀವಿಗಳೂ ಪಡೆದಿರುವ ಹಕ್ಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, April 12, 2022

ಶ್ರೀರಂಗ ವಚನಾಮೃತ (Sriranga Vachanamruta)

ನಮ್ಮ ವಿಕಾಸವೆಲ್ಲಾ ಶುಕ್ರಜೀವಿಯಿಂದ ಎಂದು ಮೆಡಿಕಲ್ ಸೈನ್ಸ್ (ವೈದ್ಯ ವಿಜ್ಞಾನ) ಹೇಳುತ್ತದೆ. ಅದಕ್ಕೂ ಹಿಂದೆ ಆಧ್ಯಾತ್ಮಿಕವಾದ ಶಕ್ತಿ ಮೂಲವಾಗಿದೆ. ವಿಕಾಸವನ್ನು ಅನುಸರಿಸಿ ನಾವು ಸಾಗಿದರೆ ಪ್ರಕಾಶದೆಡೆಗೆ ಸಾಗಬಹುದು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, April 7, 2022

ಶ್ರೀರಂಗ ವಚನಾಮೃತ (Sriranga Vachanamruta)

ಬೀಜವನ್ನು ನೆಟ್ಟಾಗ ಎಲೆ, ಹೂವು, ಕಾಯಿ ಎಲ್ಲಕ್ಕೂ ಬೇರಿನೊಡನೆ ಸಂಬಂಧ ವಿದ್ದರೆ ಅದರ ಸೌಕುಮಾರ್ಯ ಸೌಗಂಧ್ಯಗಳೆಲ್ಲವೂ ಅಂತೆಯೇ ಇರುತ್ತದೆ. ಆದರೆ ನಾನೆಲ್ಲಿ? ಬೇರೆಲ್ಲಿ? ನನಗೂ ಅದಕ್ಕೂ ಸಂಬಂಧವಿಲ್ಲವೆಂದರೆ ಅದರ ಸಂಬಂಧ ತಪ್ಪಿದ ಮರುಕ್ಷಣದಿಂದಲೇ ಎಲೆಯಾಗಲೀ, ಮಿಡಿಯಾಗಲೀ, ಹೂವಾಗಲೀ ಬದಲಾಗಲಾರಂಭಿಸುತ್ತದೆ. ಅಂತೆಯೇ ಜೀವಿಯು ತಾನು ಚೆನ್ನಾಗಿರಬೇಕಾದರೆ ಎಲ್ಲವನ್ನೂ ತನ್ನ ಮೂಲಕ್ಕೆ ಕೊಟ್ಟುಕೊಳ್ಳಬೇಕು. ತಮ್ಮ ಜೀವನ ಸುಂದರವಾಗಬೇಕಾದರೆ ವಿಶ್ವಮೂಲನ ಅಡಿದಾವರೆಗಳಲ್ಲಿ ಅದು ಸಮರ್ಪಿತವಾಗಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, April 5, 2022

ಶ್ರೀರಂಗ ವಚನಾಮೃತ (Sriranga Vachanamruta)

ಸಂತೆ ವ್ಯಾಪಾರಕ್ಕೆ ಬಂದಿರುವುದು ಸರಿಯೇ. ಹಾಗೆಂದು ವ್ಯಾಪಾರದಲ್ಲಿ ನಿರುತ್ಸಾಹಪಡಬೇಕಾಗಿಲ್ಲ. ಆದರೆ ವ್ಯಾಪಾರದ ಉತ್ಸಾಹದಲ್ಲಿ ತನ್ನ ಮನೆಗೆ ಹೋಗಿ ಸೇರಬೇಕಾದ್ದನ್ನು ಮಾತ್ರ ಮರೆಯಬಾರದು.

To know more about Astanga Yoga Vijnana Mandiram (AYVM) please visit our Official Website, Facebook and Twitter pages